ಬೀದಿಪಾಲಾದ ಅಮ್ಮಂದಿರು..

ಒಂದೆರಡು ತಿಂಗಳ ಹಿಂದೆ ಅವರು “ಸುಷ್ಮಾ.. ಮಾರ್ಚ್‌ನಲ್ಲಿ ಬೆಂಗಳೂರಿಗೆ ಬರೋದಿದೆ.. ನೀನ್ಯಾವ ಏರಿಯಾದಲ್ಲಿ ಇರೋದು” ಅಂತ ಕೇಳಿದ್ರು. ನಾನು ನಾನಿರುವ ಏರಿಯಾದ ಹೆಸರು ಹೇಳಿ, ಏನು ಸಮಾಚಾರ ಎಂದು ವಿಚಾರಿಸಿದರೆ, “ಸ್ಟೈಕ್‌ ಮಾರಾಯ್ತೀ.. ಈ ಸಂಬ್ಳ ಎಲ್ಲಿ ಸಾಲುತ್ತೆ ಹೇಳು.. ” ಅಂದ್ರು. “ಸರಿ.. ಎಲ್ಲಿ… Continue reading

ಪುಟ್ ಕಥೆಗಳು

ಅವಳು : ಹೀಗೆಂದು ಅಂದುಕೊಂಡೇ ಸೇರಿದ್ದಲ್ಲವಾ.. ಮತ್ಯಾಕೆ ಈ ತೊಳಲಾಟ?! ಅವನು : ನದಿದಂಡೆಗೆ ವಿಹಾರಕ್ಕೆ ಬಂದವನಿಗೆ, ಹರಿವ ನೀರ ಜೊತೆ ಪ್ರೀತಿಯಾಗಬಾರದಿತ್ತು. ನದಿ ಚಲಿಸಿತು, ದಡ ಉಳಿಯಿತು! ಅವತ್ತು, “ಐ ಲವ್‌ ಯೂ ಟೂ” ಅಂದೆ. “ನಕ್ಷತ್ರ ಜಾರಿ ಬೊಗಸೆಗೆ ಬಿತ್ತು” ಎಂದ. ಇವತ್ತು,… Continue reading

ಈ ಸಂಭಾಷಣೆ..

ಅವ ಬರೋದು ಇನ್ನೆಷ್ಟೊತ್ತಾಗುತ್ತೋ..!! ಕಾಯೋದು ಅಂದ್ರೆ ಅವತ್ತಿನಷ್ಟೇ ಕಷ್ಟ ಇವತ್ತೂ.. ಅದಕ್ಕೆ ಅವನಿಗಾಗಿ ಕಾಯದೇ, ನಾನು ಆರ್ಡರ್‌ ಮಾಡಿಯಾಗಿತ್ತು.. ನನ್ನಿಷ್ಟದ ಸ್ಕಾಚ್‌ ನನ್ನ ಮುಂದಿತ್ತು. ಮಂದ ಬೆಳಕಿನ ನಡುವೆ ಒಂದೊಂದೇ ಸಿಪ್‌ ಒಳಗೆಳೆದುಕೊಳ್ಳುತ್ತಿದ್ದೆ. ಅವ ಬಂದ. ಬಿಯರ್‍ ಬಿಟ್ಟು ಬೇರೆ ಮುಟ್ಟದ ಜಾತಿ ಅವಂದು. ನಾನೋ… Continue reading

ರಂಜಿತನೆಂಬ ಚಿನಕುರುಳಿ

ನಮ್ಮ ಏರಿಯಾದಲ್ಲಿ ಒಂದಿಷ್ಟು ಜನ ಚಿನಕುರುಳಿ ಮಕ್ಕಳಿದ್ದಾರೆ. ಅಂದಾಜು ಸುಮಾರು ಹನ್ನೆರಡು ಹದಿಮೂರು ವರ್ಷದೊಳಗಿನವರು. ಸಂಜೆ ಹೊತ್ತು ಒಂದುಗಂಟೆ ಎಲ್ಲರೂ ಸೇರಿ ಏನೇನೋ ಆಟಗಳನ್ನು ಆಟವಾಡ್ತಾ ನಗ್ತಾ, ಬೈಯ್ತಾ, ಹೆದರ್ತಾ, ಹೆದರಿಸ್ತಾ ಮತ್ತೊಮ್ಮೆ ಎಲ್ರೂ ಒಂದಾಗ್ತಾ ಇರ್ತಾರೆ. ಈ ಮಕ್ಕಳಿಗೆ ಮನೆಯಲ್ಲಿ ಒಂದಿಷ್ಟು ಏನೇನೋ ರಿಸ್ಟ್ರಿಕ್ಷನ್ಸ್‌ಗಳಿವೆ.… Continue reading

ಹನಿ ಹನಿ ಇಬ್ಬನಿ

೧. ಮುತ್ತುಕೊಟ್ಟ ತುಟಿ ಸುಡುತ್ತಿದೆ ಅಂದೆ ಸಿಗರೇಟು ಬಿಟ್ಟ..! ೨. ನಶೆಯ ಬಾಟಲಿ ಹೀರಿದಾಗಲೆಲ್ಲಾ ಅಳುತ್ತಾನಂತೆ ನನ್ನೆದೆಯ ದುಃಖ ಸುರಿದು ಅವನ ಮಡಿಲಿಗೆ ಸೇರಿದ್ದು ಹೇಗೆ..? ೩. ಇವನ ತಿರಸ್ಕಾರದಲ್ಲಿ ನಿನ್ನ ಛಿದ್ರಗೊಂಡ ಕನಸುಗಳಿವೆ ಬದುಕು ಬರಿದಾಗಿದೆ ಕನಸುಗಳನ್ನು ಕೊಲ್ಲುವುದು ಮಹಾಪಾಪವಾ.? ೪. ಒಡೆಯಿತೆಂದ ಮಾತ್ರಕ್ಕೆ… Continue reading

ತಾನೊಂದು ಬಗೆದರೆ..!

“ಅದೆಷ್ಟ್ ಹೊತ್ತು ಮಾಡ್ತೀಯೇ ಮಾರಾಯ್ತೀ.. ಸರಿಯಾಗಿ ಹತ್ತು ಗಂಟೆಗೆ ಮೀಟಿಂಗ್‌ ಅಂತ ಫಿಕ್ಸ್‌ ಆದ್ಮೇಲೆ ಅಷ್ಟೊತ್ಗೆ ಸರಿಯಾಗಿ ಅಲ್ಲಿರ್‍ಬೇಕು ತಾನೇ..? ನೀನ್‌ ನೋಡಿದ್ರೆ ಇನ್ನೂ ರೆಡಿನೇ ಅಗಿಲ್ಲಾ..! ಆಗ್ಲೇ ಒಂಭತ್ತುವರೆಯಾಯ್ತು.. ಸರೀ.. ಆ ತಿಳಿಗುಲಾಬಿ ಬಣ್ಣದ ಕುರ್ತಾಕ್ಕೆ ಇಸ್ತ್ರೀ ಮಾಡ್ತೀನಿ, ಅದ್ರ ಮೇಲೆ ಹಳದಿ ಬಣ್ಣದ… Continue reading

ಏಸ – ಬಣ್ಣ ಬದ್ಕ್‌ದ ಸಮಾವೇಷ

ತುಳು ಚಿತ್ರರಂಗದಲ್ಲಿ ಬಹಳಷ್ಟು ಸಿನೆಮಾಗಳು ಬರುತ್ತಿರುವ ಈ ಹೊತ್ತಿನಲ್ಲಿ, ನನ್ನಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ ಚಿತ್ರವೆಂದರೆ “ಏಸ”. ಮೊದಲ ದಿನದಿಂದಲೂ ಚಿತ್ರತಂಡ ಜನರನ್ನು ತಲುಪುದಕ್ಕೆ ಮಾಡಿದ ವಿಶೇಷ ಪ್ರಯತ್ನ , ಪರಿಶ್ರಮಗಳ ಜೊತೆಗೆ ಆತ್ಮೀಯ ಗೆಳೆಯನ ಕನಸಿನ ಕೂಸಿದು ಎಂಬುದು ನನ್ನೊಳಗೆ “ಏಸ”ದ ಬಗೆಗೆ ಕುತೂಹಲಭರಿತ… Continue reading

ಬಾಲ್ಯದೊಂದಿಗೆ ಬೆಸೆದ ಹೊಸ ತಂತು..!

ನಾವು ನಮ್ಮ ಶಾಲಾ ಜೀವನದಲ್ಲಿ ಬಹಳಷ್ಟು ಶೈಕ್ಷಣಿಕ ‘ಪ್ರಯೋಗ’ಗಳಿಗೆ ಒಳಗಾ(ಬಲಿಯಾ)ದವರು. ವಾರ್ಷಿಕ, ಅರ್ಧವಾರ್ಷಿಕ ಪರೀಕ್ಷೆಗಳೆಂದು ಮೂರನೇ ತರಗತಿಯವರೆಗೆ ಓದಿ, ಆಮೇಲೆ ಒಂದೆರಡು ವರ್ಷ “ತ್ರೈಮಾಸಿಕ ಪರೀಕ್ಷೆ”ಗಳನ್ನು ಬರೆಯಬೇಕಾಯ್ತು. ಅಲ್ಲಿಂದ ಒಂಭತ್ತನೆಯವರೆಗೆ “ಸೆಮಿಸ್ಟರ್‌ ಪದ್ಧತಿ” ಹತ್ತನೇ ತರಗತಿಯಲ್ಲಿ ಮತ್ತೆ ವಾರ್ಷಿಕ ಪರೀಕ್ಷಾ ಪ್ರಸಂಗ. ಈ ನಡುನಡುವೆ ಬದಲಾಗುತ್ತಿರುವ… Continue reading