ಅವನ ಪ್ರಶ್ನೆಗೆ ಇವಳ ಉತ್ತರ!


ನೆಲಗುದ್ದಿನೀರುತೆಗೆಯಬೇಕಾದವಯಸ್ಸಿಗೆನೆಲದಮೇಲೆಕಾಲೇನಿಲ್ಲದಂತೆ, ನೆತ್ತಿಯಮೇಲೆಕಣ್ಣಿಟ್ಟುಕೊಂಡಿದ್ದಾರೇನೋಅನ್ನುವಂತೆಓಡಾಡುವಸೊಬಗಸುಬ್ಬರಕುರಿತುತುಸುಜಾಗೃತೆಒಳ್ಳೆದುಮೆದುಮನಸ್ಸಿನಮುದ್ದುಮಣಿಗಳೇ..! ನೋಟ್ಸ್ತಗೊಂಡುಲವ್ಲೆಟರ್ಸಮೇತವಾಪಾಸುಕೊಡುವ,ಮೊಬೈಲ್ನಂಬರ್ಹೇಗೇಗೋಸಂಪಾದಿಸಿವಾಟ್ಸ್ಆಪ್ನಲ್ಲಿಹಾಯ್ಎನ್ನುತ್ತಾಲೀಟರ್ಗಟ್ಲೇಜೊಲ್ಲುಸುರಿಸುವ, ಫೇಸ್ಬುಕ್ಕಿಗೂದಾಳಿಯಿಟ್ಟುಜಗದೇಕಸುಂದರಿನೀನುಅನ್ನುವಂತೆಲೈಕ್ಒತ್ತುವ, ಕಾಮೆಂಟ್ಹಾಕುವ, ಹುಡುಗಿಯರಟ್ವೆಂಟಿಫೋರ್ಇನ್ಟೂಸೆವೆನ್ಫೇವರೇಟ್ಚಾಕಲೇಟ್ಕಾನ್ಸೆಪ್ಟ್ಅನ್ನುದುರುಪಯೋಗಪಡಿಸಿಕೊಂಡುಇನ್ನಿಲ್ಲದಮುಗ್ಥತೆಯಮುಖದಮೇಲೆತಂದುಕೊಂಡುಚಾಕಲೇಟ್ತಂದುಕೊಟ್ಟುಲವ್ಯೂಅನ್ನುವಮೂತಿಗೆಬಿದ್ದುಬಿಟ್ಟಿರೋಜೋಕೆ.. ಖೆಡ್ಡಾಕೆಕೊಡವಿದಸಂತಸದಲ್ಲಿಚೆನ್ನಿಗರಾಯರಗುಂಪಲ್ಲಿಪಾರ್ಟಿನಡೆಯದ್ದಿದ್ದರೆಕೇಳಿ..


ನೀವುಹೋಗೋದೇವಸ್ಥಾನದಮುಂದೆಯೇಸದಾದರ್ಶನಕ್ಕೆಕಾಯುವಹುಡುಗುಬುದ್ಧಿಯಲ್ಲಿಬೇಟೆಗಾರನತುಡಿತ. ಹುಡುಗರಿಗೆತಾಳ್ಮೆಕಮ್ಮಿಅನ್ನುವವಿಷಯಸುಳ್ಳಾಗುವುದೇಈಗ..ಒಲಿಸಿಕೊಳ್ಳಲುಕಸರತ್ತುನಡೆಸುವಸಮಯದಲ್ಲಿ. ಸಿನೆಮಾನೋಡಿ, ರಾಜಕುಮಾರನಕನಸುಕಾಣುವಮಾಡರ್ನ್ಮುಗ್ಥಮುಗುದೆಯರನ್ನುಅದೇಸಿನೆಮಾಸ್ಟೈಲ್ನಲ್ಲಿಯೇತ್ರಾಸವಿಲ್ಲದೇಹಳ್ಳಕ್ಕೆಬೀಳಿಸಿಕೊಳ್ಳುತ್ತಾರೆಆಧುನಿಕಸೋಕಾಲ್ಡ್ರಾಜಕುಮಾರರು.


ಪಡಕೊಳ್ಳುವಸಲುವಾಗಿಕಳಕೊಳ್ಳುವನೀತಿಯನ್ನುರೂಡಿಸಿಕೊಂಡಿರುವಶಕುನಿಬುದ್ಧಿಯಪುರುಷಪುಂಗವರುತಾವುನಿಮಗಾಗಿಅದೆಷ್ಟೆಲ್ಲಾಕಷ್ಟಪಡುತ್ತಿದ್ದೇವೆಎಂಬುದನ್ನುಹುಡುಗಿಗೆತಿಳಿಯುವಂತೆಯೇಮಾಡುತ್ತಿರುತ್ತಾರೆ. ಮೆದುಹುಡುಗಿಪಾಪ!! ತನಗಾಗಿಎಷ್ಟುಪಾಡುಪಡುತ್ತಿದ್ದಾನೆಅಂತೆಲ್ಲಾಕನಿಕರತೋರಿಸಿನಗೆಯೊಂದಬಿಸಾಕಿದರೆ, ಹುಡುಗಿತನ್ನಜೊತೆಲವ್ವಿಗೆಬಿದ್ದಿದ್ದಾಳೆಂದೇನಿಕ್ಕಿಯಾಗಿಬಿಡುತ್ತಾರೆ. ಹುಡುಗರದುಕಷ್ಟತೋರಿಸಿಕೊಂಡುಇಷ್ಟಪಡಕೊಳ್ಳುವತೀಕ್ಣಬುದ್ದಿ!




ಮೋಸಮಾಡುವುದುಹುಡುಗಿಯರಲ್ಲಾಸ್ವಾಮಿ.. ಮೋಸಹೋಗುವುದುಹುಡುಗಿಯರು. ಹುಡುಗಿಯೇನಾದರೂಪ್ಪಿತಪ್ಪಿಲವ್ವಿಗೆಬಿದ್ದಳೆಂದುಕೊಳ್ಳಿಬೈಕಿನಬೆನ್ನಿಗೆಹುಡುಗಿಯನ್ನುಅಂಟಿಸಿಕೊಂಡುಊರುತುಂಬಾಮೆರವಣಿಗೆಮಾಡಿಅವಳಮನೆಯವರಿಂದಛೀಮಾರಿಹಾಕಸಿದಿದ್ದರೆಹುಡುಗನಲವ್ವಿಗೆಬೆಲೆಯಿದೆಹೇಳಿ..? ಇದೇನೆವವಾಗಿಬ್ರೇಕಪ್ಏನಾದರೂಆಯಿತೋಹುಡುಗದೇವದಾಸ, ಹುಡುಗಿಅಕ್ಷರಷಃರಾವಣಸುಪರ್ದಿಯಲ್ಲಿರುವವನವಾಸದಸೀತೆ.


ಗಡ್ಡಬಿಟ್ಟದೇವದಾಸನೋಅದೇಪೋಸಲ್ಲಿಹಳೆಹುಡುಗಿಯಹೆಸರಲ್ಲೇಮತ್ತೊಂದುಹುಡುಗಿಯನ್ನುಪಟಾಯಿಸಿಬಿಡುತ್ತಾನೆಸೀತೆಯಪಾಡೇನು..?! ಹುಡುಗರುಹೂವಿಂದಹೂವಿಗೆಹಾರುವದುಂಬಿಗಳು.. ಇವತ್ತುಹೂಮಜವೆನಿಸಿದರೆಇಲ್ಲಿ, ಇಲ್ಲಾಇನ್ನೊಂದುಚಂದದಹೂಸಿಕ್ಕರೆಇಲ್ಲಿಂದಅಲ್ಲಿ. ಹೂಗಳೋದುಂಬಿಗಳಬಣ್ಣಕ್ಕೆ, ಮಾತಿಗೆಮರುಳಾಗೋಬಲಿಪಶುಗಳು.




ಬೀಅಲರ್ಟ್ಗರ್ಲ್ಸ್..!

ಕನಸಿನರಾಜಕುಮಾರಧರೆಗಿಳಿದುಬರಲುಬದುಕುಎಂಭತ್ತರದಶಕದಸಿನೆಮಾವೂಅಲ್ಲಾ.. ಹುಡುಗನೆನ್ನುವವಆಗಿನಕಾಲದಹೀರೋನೂಅಲ್ಲಾ. ಹಗಲುರಾತ್ರಿಗಳಅರಿವಿಲ್ಲದೇಫ್ಲರ್ಟ್ಮಾಡುವಹುಡುಗರದ್ದುಗುಳ್ಳೆನರಿಗಳಪಾರ್ಟಿ. ನೀವೆಂದರೆಸಾವಿತ್ರಿಯಥರಹಯಮನನ್ನುಬೇಕಾದರೆಜಯಿಸಬಲ್ಲಿರಿ, ನಿಮ್ಮಜಾಣ್ಮೆಬುದ್ಧಿಮತ್ತೆಗಳನೆಲ್ಲವನ್ನೂಸೂರೆಗೈದುನಿಮ್ಮನ್ನೇಬುದ್ಧುಮಾಡೋಇಪ್ಪತ್ತೊಂದನೇಶತಮಾನದಹೈದರನಲ್ಲಾ. ಮಂಕುಬೂದಿಎರಚಿನಿಮ್ಮನ್ನಮಂಕಿಮಾಡುವಕಪಿಸೈನ್ಯವಿದೆನಿಮ್ಮಸುತ್ತಮುತ್ತಲೂಎಚ್ಚರಿಕೆಎಚ್ಚರಿಕೆ. ಒಂದುಹುಡುಗಸುಮ್ಮಸುಮ್ಮನೆನಿಮ್ಮಜೊತೆಕ್ಲೋಸ್ಆಗುತ್ತಿದ್ದಾನೆ, ಪಡಬಾರದಕಷ್ಟಪಟ್ಟುನಿಮ್ಮೆದುರುಶ್ರಮಜೀವಿಯಾಗುತ್ತಿದ್ದಾನೆಎಂದರೆನಿಮಗೊಂದುಹಳ್ಳತೋಡಿದ್ದಾನೆಅಂತಲೇಅರ್ಥಮಾಡಿಕೊಂಡುಬಿಡಿಗರ್ಲ್ಸ್. ಅಪ್ಪನೋಡಿದಹುಡುಗನಿಂದನೀವುತಾಳಿಕಟ್ಟಿಸಿಕೊಳ್ಳುವಾಗಬಂದುಮಂತ್ರಾಕ್ಷತೆಹಾಕಿಹೋಗುವಷ್ಟುಸಲಿಗೆಸದರಸಾಕುನವಕಾಲದಹುಡುಗರೊಂದಿಗೆ. ಪ್ರೀತಿಪ್ರೇಮವೆಂದುಹೋದಿರೋಜೋಕೆ.
 ————————————————————————————-

[ನಾ ಹೀಗೆಲ್ಲಾ ಹುಡುಗರ ಬಗ್ಗೆ ಬರೆಯಬಲ್ಲೇನಾ..?!
ಹೀಗೊಂದು ಬರಹ ಬೇಕಿತ್ತು ಅಂದಾಗ ಹೀಗೆ ಬರೆದಿದ್ದಷ್ಟೇ
ಮತ್ತೇ ಹುಡುಗರ ಬಗ್ಗೆ ನಂಗೇನೂ ದ್ವೇಷವಿಲ್ಲಾ ನೋಡಿ 😉

ಈ ವಾರದ ವಿಜಯ ನೆಕ್ಟ್ಸ್ ನಲ್ಲಿ ಪ್ರಕಟಿತ (02-01-2015]

ಹೊಸ ವರ್ಷದ ಶುಭಾಶಯಗಳು!

ಮತ್ತೊಂದು ಅಂಚನ್ನು ತಲುಪಿದ್ದೇವೆ.
ದಾಟಿ ಮುಂದೆ ಹೆಜ್ಜೆಯಿಡಲೇ ಬೇಕು, ಹಾಗೇ ಇಡುವುದಕ್ಕೆ ಮುನ್ನ ಹಿಂದೆ ಒಮ್ಮೆ ಹೊರಳಿ ನೋಡಲೇಬೇಕಾಲ್ಲ..?!
ಹೊಸ ವರುಷ ಬಂದಿದೆ..!

ಗೋಡೆಯ ಮೇಲೆ ತೂಗು ಹಾಕಿರುವ ಕ್ಯಾಲೆಂಡರ್‍ ತೆಗೆದು, ಹೊಸದೊಂದು ತಂದು ತೂಗು ಹಾಕುತ್ತಿವಲ್ಲ.. ಹಾಗೇ ಹಳೇ ನೋವುಗಳ ಜಾಗದಲ್ಲಿ ಹೊಸ ಸಂತಸಗಳನ್ನು, ಮುರಿದು ಬಿದ್ದ ಕನಸುಗಳ ಅಂಗಳದಲ್ಲಿ ಹೊಸ ಕನಸುಗಳ ಹರವಿಕೊಳ್ಳುವಂತಿದ್ದರೆಹೊಸ ವರ್ಷಕ್ಕೊಂಡು ಅರ್ಥವಲ್ಲವಾ..? ಹಳೇ ಗೋಡೆಗೆ ಅಂಟಿಕೊಂಡಿರುವ ಖುಷಿಗಳು ಮುಂದಿನ ಗೋಡೆಗೂ ವರ್ಗವಾಗುವಂತಿದ್ದರೆ..?!

ಪಟಪಟನೇ ಹೊರಳಿ ಹೋದ ವರುಷದಲ್ಲಿ ಗಳಿಸಿದ್ದೆಷ್ಟು? ಉಳಿಸಿದ್ದೆಷ್ಟು? ಕಳೆದಿದ್ದೆಷ್ಟು..? ಲೆಕ್ಕವೂ ಕೈಗೆ ಸಿಗಲಾರದಷ್ಟು ವೇಗವಾಗಿ ಮುಗಿದುಹೋಗಿಬಿಟ್ಟಿದೆ. ನಾವು ಹೊಸ ಕನಸುಗಳ ಕಟ್ಟಿಕೊಳ್ಳುವುದಕ್ಕೆ ಸಜ್ಜಾಗಿದ್ದೇವೆ.


ಅಮ್ಮನೆನ್ನುವವಳೂ ಹೊಸ ವರುಷಕ್ಕೆ ಹೊರಳಿದ್ದಾಳೆ ಎದೆಯ ತುಂಬಾ ಮಿಂಚು ತುಂಬಿಕೊಂಡು,ಕಣ್ಣ ಕೊಳದಲ್ಲೇ ಕಣ್ಣೀರಿಂಗಿಸಿಕೊಂಡು ಅವಳ ಜೀವಗಳಿಗೆ ಕನಸು ಹೊಸೆವ ಕಸುಬು ಮಾಡುತ್ತಾಳೆ, ಗಂಡ ಅವಳ ನಗುವ ಕಿತ್ತು ಸಾರಾಯಿ ಕುಡಿವಾಗ, ಕುಡಿಗಳಿಗಾಗಿ ತನ್ನ ನಗುವ ಕೊಂದು, ಅನ್ನ ಹುಟ್ಟಿಸುತ್ತಾಳೆ ಅಮ್ಮ. ವರ್ಷದ ತುಂಬಾ ಆ ತಾಯಿಗೆ ಒಂದು ಹಿಡಿ ನಗುವನ್ನಲ್ಲದೇ ಮತ್ತೇನು ಕೊಡಬಹುದು?

ಇವಳೊಬ್ಬಳಿದ್ದಾಳೆ, ಅವಳಿಗೆ ಒಂಟೊಂಟಿ ಭಾವದಲ್ಲಿ ಗಂಟುಬಿದ್ದಿರುವಾಗ ಅವನ ನೆನಪಾಗುತ್ತದೆ. ಮೇಸೇಜು ಮಾಡುತ್ತಾಳೆ. “ಸದಾ ಮೆಸೇಜು ಮಾಡಿಕೊಂಡು ಹರಟೆ ಹೊಡೆಯಲು ನಾವು ಚೈಲ್ಡಿಶ್ ಅಲ್ಲಾಮೇಚ್ಯೂರ್‍ಡ್ ಆಗಿದ್ದೇವೆ.. ಬೆಳೆದ್ದೇವೆ…” ರಪ್ಪನೇ ಮೆಸೇಜು ರಾಚುತ್ತದೆ. ಹತ್ತಿರವಿದ್ದಾಗಲೂ ಮುಖ ಕೊಟ್ಟು ಮಾತಾಡದೇ ಮೊಬೈಲ್ ಕುಟ್ಟುತ್ತಿರುವ ಅವನ ಮೆಚ್ಯೂರ್‍ಡ್ ಚಿತ್ರ ಕಣ್ಣೆದುರು ಬಂದು ಫಳಕ್ಕನೇ ಹನಿಯೊಂದು ಉದುರತ್ತದೆ. ಅವಳು ಸುಮ್ಮನಾಗುತ್ತಾಳೆ.

ಬೈಕ್ ಎಂಬತ್ತಕ್ಕಿಂತ ಕಡಿಮೆ ಓಡಿಸಿದರೆ ಥ್ರಿಲ್ ಇಲ್ಲವೆನ್ನುವ, ಹೊಗೆ ಎಳೆದು ಸಿಕ್ಕುಬಿದ್ದರೂ ಮೀಸೆ ಮಣ್ಣಾಗದ, ಕಟ್ಟಿಕೊಂಡ ಕನಸುಗಳಿಗೆ ಎಳ್ಳುನೀರು ಬಿಟ್ಟು ಹೊರನಡೆದ, ಹದಿಹರೆಯದ ಚೆಲ್ಲಾಟಗಳಿಗೆ ಜೀವನ ತೆತ್ತುಬಿಡುತ್ತನೇನೋ ಅನ್ನುವಷ್ಟು ಭಯ ಹುಟ್ಟಿಸಿರುವ ಒಡಹುಟ್ಟಿದನೆಂದರೆ ಸಮುದ್ರವಿಹಾರಕ್ಕೆ ದೋಣಿಯಲ್ಲಿ ಹೋದವ ಈಜಿ ದಡ ಸೇರುತ್ತೇನೆಂದು ಇದ್ದ ದೋಣಿಯನ್ನೂ ಬಿಟ್ಟು ಸಮುದ್ರಕ್ಕೆ ಹಾರಿದ ಕನಸಸಷ್ಟೇ..!

ಸುತ್ತಲೂ ಅಣ್ಣತಮ್ಮ, ಅಕ್ಕತಂಗಿ, ಅಪ್ಪಮಗಳು..ಇಂತದ್ದೇ ಕೌಟುಂಬಿಕ ಹೆಸರುಗಳನ್ನು ಕೊಟ್ಟುಕೊಂಡು ನಿಜದ ಸ್ನೇಹವಾ ಕಳೆದುಕೊಳ್ಳುತ್ತಿದ್ದೇವಾ? ಅನುಮಾನವಾಗುತ್ತೆ ನನಗೆ. ಇಂತಹ ಹೆಸರುಗಳು ಬೇಗ ಸೆಳೆಯುವುದು ನಿಜ..! ಆದರೆ ಅದೆಷ್ಟು ಜನ ಇಂತಹ ಹೆಸರುಗಳನ್ನು ಇಟ್ಟುಕೊಂಡು ನಮ್ಮ ಬದುಕಿನೊಳಗೆ ಕಾಲಿಡುವುದಕ್ಕೆ ಅರ್ಹರು..? ಅಥವಾ ನಾವೆಷ್ಟು ಅರ್ಹರು ಆ ಹೆಸರಿನಲ್ಲಿ ಅವರ ಮನೆ ಮನಸ್ಸಿನೊಳಕ್ಕೆ ಇಳಿಯುವುದಕ್ಕೆ..? ಮುಖವಾಡಗಳ ಬಾಳಿಕೆ ತುಂಬಾ ಕಡಿಮೆ. ಫೇಸ್‌ಬುಕ್ಕಿನಲ್ಲಿ ಫೀಲಿಂಗ್ ಸ್ಯಾಡ್ ಅನ್ನುವ ಸ್ಟೇಟಸ್ ಗೆ ಲೈಕು, ಕಾಮೆಂಟು ಮಾಡುವವರು, ಕಾಲ್ ಮಾಡಿ ವಿಚಾರಿಸುವವರೆಲ್ಲಾ ಆಪ್ತರೇ ಆಗಿದ್ದರೆ, ಮಾನವೀಯತೆಗಳು ಇವತ್ತು ನಡುಬೀದಿಯಲ್ಲಿ ಕೊಲೆಯಾಗುತ್ತಿರಲಿಲ್ಲವೇನೋ..! ಫೀಲಿಂಗ್ ಸ್ಯಾಡ್ ಅನ್ನುವಾಗ ಮಾತ್ರ ಇನ್ನಿಲ್ಲದ ಆಸ್ಥೆಯಿಂದ ಕೇಳುವವರಿಗೆ ನಮ್ಮ ನೋವುಗಳ ಬಗೆಗಿನ ಇನ್ಫರ್‌ಮೇಷನ್ ಬೇಕಿರುತ್ತದೆಯೇ ಹೊರತು ಅವುಗಳ ಶಮನವಲ್ಲ.. !

Life goes on..!
ಅಭದ್ರತೆ, ಅಸಹಾಯಕತೆ, ಅವಮಾನಗಳು ಎಲ್ಲದರ ನಡುವೆಯೂ ಜೀವನ ನಡೆಯುತ್ತಿರುತ್ತದೆ ಅದರ ಪಾಡಿಗೆ. ಬದುಕೆಂದರೆ ಸುಮ್ಮನಲ್ಲಾ, ಎಚ್ಚರದಿಂದ ನಡೆಯಬೇಕು ಅನ್ನುತ್ತಿರುತ್ತಾಳೆ ಅಜ್ಜಿ. ಇಟ್ಟ ಹೆಜ್ಜೆಗಳಿಗೆಲ್ಲಾ ಲೆಕ್ಕವಿಟ್ಟೇ ನಡೆಯುವುದಾಗಿದ್ದರೆ, ನೋವುಗಳು ಇಲ್ಲದ ಖುಷಿಗಳಿಗೂ ಒಲ್ಲದ ಬದುಕನ್ನ ಬದುಕುತ್ತಿರಬೇಕಾಗುತ್ತದೇನೋ..! ಬದುಕೆಂದರೆ ಬದುಕು ಅಷ್ಟೇ, ಕ್ಷಣಕ್ಷಣವನ್ನೂ ಹೀರಿ ಬದುಕುತ್ತೇನೆಂಬಂತೆ ಬದುಕಬೇಕಿದೆ.ಬದುಕಿಗೊಂದು ನಗೆಯ ತೀವೃತೆಯ ದಕ್ಕಿಸಿಕೊಡಬೇಕಿದೆ.

ಎಲ್ಲರ ಬದುಕೂ ಬಣ್ಣವಾಗಲಿ.
ಹೊಸ ವರ್ಷದ ಶುಭಾಶಯಗಳು

Blog at WordPress.com.

Up ↑